ಲಯ…
ಬೆಳಗು.
ಮಂಜು.
ಮೊದಲ ಚಲನೆ.
ಬೆಳಕು.
ಸಾವಿರ ಹೊಳಪು.
ಚಿಕ್ಕ ಕಲ್ಲುಗಳು.
ಕಲಕಲ ನಾದ.
ಮತ್ತೆ… ಮೌನ.
ಕಿರಿದಾದ ದಾರಿ.
ಒಂದು ತಿರುವು.
ಹಳೆಯ ಮರಗಳ ನೆರಳು.
ಗಾಳಿ.
ಹಾರುವ ಹಕ್ಕಿ.
ಮಳೆ.
ಗಾಢ ಸ್ವರ.
ಬೇಸಿಗೆ.
ಮಂದ ಬೆಳಕು.
ಆಳ.
ನಿಶ್ಚಲತೆ.
ಮತ್ತೆ… ಹರಿವು.
ಮತ್ತೆ… ನಗು.
ಮತ್ತೆ… ಅಳು.
ಮತ್ತೆ… ಕುಣಿತ.
ಯಾವ ಆತುರವೂ ಇಲ್ಲ.
ಯಾವ ವಿರೋಧವೂ ಇಲ್ಲ.
ತಲುಪುವ ಅಪೇಕ್ಷೆ ಇಲ್ಲ .
ಹಿಂದಿರುಗುವಿಕೆ ಇಲ್ಲ .
ಒಂದು ದಿನ…
ಯಾವಾಗಲೂ ಇದ್ದ ದಡಗಳು ಕರಗುತ್ತವೆ.
ಹೆಸರಿಲ್ಲ.
ದೇಶವಿಲ್ಲ.
ದಿಕ್ಕಿಲ್ಲ.
ಕಾಲವಿಲ್ಲ.
ಅಂತ್ಯವಿಲ್ಲ.
ಇರುವುದು…
ಒಂದೇ.. ಲಯ.
ಅನಂತ ಲಯ.
ಅಲ್ಲ…
ಅನಂತಾಲಯ.
